ಕ್ಯಾಮರಾ ಹಿಡಿದು ಕಂಡ ಕಂಡದ್ದೆಲ್ಲ ಕ್ಲಿಕ್ಕಿಸುವ ಹುಚ್ಚ.
ಗುಡ್ಡ-ಬೆಟ್ಟ, ಪ್ರಾಣಿ-ಪಕ್ಷಿ, ಕ್ರಿಮಿ-ಕೀಟಗಳಾದಿ
ಸಜೀವ-ನಿರ್ಜೀವ ಎಲ್ಲವೂ ಅವನಿಗೆ ಒಂದೇ
ಎಲ್ಲ ಅವನ ಛಾಯಾಚಿತ್ರದ ವಸ್ತು; ಸನ್ನೆ-ಮಾತಾಡುವ ಜೊತೆಯಂತೆ.
ಬಗಲಲ್ಲೇ ಜೊತೆಯಾಗಿ, ನಡೆದಲ್ಲಿ ಹಿತವಾಗಿ ನಗುವಾಗುವ ಚಿತ್ತ-ಚಿತ್ರ
ಅದಕ್ಕೇ ಅವನೊಬ್ಬ ಹುಚ್ಚ! ಜಗದ ಕಣ್ಣಿಗೆ ಹುಚ್ಚ!!

ನಯನಗಳು ಕಂಡ ಮನ ಆಸ್ವಾದಿಸಿದ ಎಲ್ಲವನು
ಅಷ್ಟೇ ನೈಜವಾಗಿ ತನ್ನ ಕ್ಯಾಮರಾ ಕಣ್ಣಲಿ
ಸೆರೆಹಿಡಿದು ಕೂಡಿಸಬೇಕೆನ್ನುವ ಬಹು ಹುಚ್ಚು.
ಅದು ಅವನಿಗೂ ಗೊತ್ತು!? ದೇವನ ಮಸೂರಕ್ಕೆ
ಸಮವಿಲ್ಲ; ಅದು ಕಲೆ ಇಲ್ಲದ ನೇರ ದರ್ಪಣ.
ಛಲ ಬತ್ತಿಲ್ಲ, ಆದರವನ ಹೋರಾಟ ಎಂದೂ ನಿಂತಿಲ್ಲ
ಅದಕ್ಕೇ ಅವನೊಬ್ಬ ಹುಚ್ಚ! ಜಗದ ಕಣ್ಣಿಗೆ ಹುಚ್ಚ!!
ಹರಿವ ನೀರಿನ ಅಡಿಯ ಕಲ್ಲದು- ಪಚ್ಚೆ ಹವಳ
ಲಕ್ಷಿಸದ ಹೊಸ ಚಿಗುರು ಅವನಿಗೆ ನವಜೀವ(ನ)ದ ಸ್ಫೂರ್ತಿ
ಅತೀ ಸಾಮಾನ್ಯ; ಅವನಿಗದು ಅಪರೂಪ, ಆಶ್ಚರ್ಯ!
ರಂಗಾಗಿಸಲು ಹಳೆಯ ಭಿತ್ತಿ, ತೋರಣವು ಕಸದ ಪಲ್ಲಕ್ಕಿ
ನವಿಲುಗರಿಯಲಿ ಹುಡುಕಿ ಕಾಮನಬಿಲ್ಲು, ಬಣ್ಣದೋಕುಳಿ
ಒಲವು ಹರಡಿ, ಹುಡಿ ನಗೆಗೂ ಅರ್ಥ ಹುಡುಕುವ ಚಿತ್ರದಾಸೆ
ಅದಕ್ಕೆ ಅವನೊಬ್ಬ ಹುಚ್ಚ! ಜಗದ ಕಣ್ಣಿಗೆ ಹುಚ್ಚ!!
Hey buddy,
ReplyDeleteSurprise!!!!! Really good one. Continue writing..
Cheers,
Manju
gud one nagi..keep moving..
ReplyDeleteನಯನಗಳು ಕಂಡ ಮನ ಆಸ್ವಾದಿಸಿದ ಎಲ್ಲವನು----
ReplyDeleteಛಲ ಬತ್ತಿಲ್ಲ, ಆದರವನ ಹೋರಾಟ ಎಂದೂ ನಿಂತಿಲ್ಲ
ಲಕ್ಷಿಸದ ಹೊಸ ಚಿಗುರು ಅವನಿಗೆ ನವಜೀವ(ನ)ದ ಸ್ಫೂರ್ತಿ
ಅತೀ ಸಾಮಾನ್ಯ; ಅವನಿಗದು ಅಪರೂಪ, ಆಶ್ಚರ್ಯ!
ivugaliddagale photographer ge yashassu.. adu ninnalliddu.. keep moving nagi.. all the best..
really nice nagi..
ಏನಪ್ಪ ವಿಶೇಷ!! ಒಂದಾದಮೇಲೆ ಒಂದು ಪುಂಕಾನುಪುಂಕಾವಾಗಿ ಬತ್ತಾನೆ ಇದ್ದು ..ಇನ್ನು ಎಷ್ಟು ಇದ್ದು ನಿನ್ನ ಬತ್ತಳಿಕೆಲಿ?
ReplyDeleteNice one my dear Huchha...
Great start! Can see Junior Vinay in You :)
ReplyDeleteKelavu saalugalantu tumbaa ishta aatu.. aadaru ashcharya!!!!
ReplyDeleteGood one....All the best...keep writing...:)
ReplyDelete@ Vinayak : ಏನೂ ವಿಶೇಷ ಇಲ್ಲಾ. ಆಫೀಸಿನಲ್ಲಿ ಫ್ರೀ ಇದ್ದೆ ಸೊ ಬರೆದೆ ಅಷ್ಟೇ
ReplyDeleteWe are surprised by your new talent..:-).
ReplyDeleteGood one..:-)
Keep writing.. keep moving..
Suuuuuuuupeerrrrrrrrrr :)
ReplyDeleteJagadalli Ni nobba Kavi...
ReplyDeleteGood one Naagi....
ನಡೆದಲ್ಲಿ ಹಿತವಾಗಿ ನಗುವಾಗುವ ಚಿತ್ತ-ಚಿತ್ರ
ReplyDeleteನವಿಲುಗರಿಯಲಿ ಹುಡುಕಿ ಕಾಮನಬಿಲ್ಲು, mast mast lines...more likes to dese lines :)